ವಿಜಯಲಕ್ಷ್ಮಿ ಮನಾಪುರ (ಆಂಗ್ಲ: ) (ಹುಟ್ಟು: ೧೯೭೨), ಕನ್ನಡದ ಲೇಖಕಿ, ಜಾನಪದ ತಜ್ಞೆ, ಸಂಶೋಧಕಿ ಮತ್ತು ಕಲಾವಿದೆ. ಜಾನಪದ ಕುರಿತ ಸೈದ್ಧಾಂತಿಕ ವಿಶ್ಲೇಷಣೆ ಮತ್ತು ಪ್ರಾಯೋಗಿಕ ಸಂಶೋಧನೆಯಲ್ಲಿ ಪರಿಣತರಾದ ಇವರು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಕೊರೋನಾವೈರಸ್ ಹಾವಳಿಯ ಸಂದರ್ಭದಲ್ಲಿ ಡಾ. ವಿಜಯಲಕ್ಷ್ಮಿಯವರು ಬರೆದು, ಸಂಯೋಜಿಸಿ, ಹಾಡಿದ ’ಕೊರೊನ ಬಂದೈತೆ ಜೋಪಾನ’ ಎಂಬ ಜನಪದ ಶೈಲಿಯ ಜಾಗೃತಿಗೀತೆಯು ಸಾಮಾಜಿಕ ಮಾಧ್ಯಮಗಳಲ್ಲಿ ಅಪಾರ ಮೆಚ್ಚುಗೆ ಗಳಿಸಿತ್ತು. == ಜೀವನ - ಶಿಕ್ಷಣ == ಪಿರಿಯಾಪಟ್ಟಣದ ಮಲ್ಲಿನಾಥಪುರದಲ್ಲಿ ೧೯೭೨ರಲ್ಲಿ ಜನಿಸಿದ ವಿಜಯಲಕ್ಷ್ಮಿ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಚಿನ್ನದ ಪದಕಗಳೊಂದಿಗೆ ಜಾನಪದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆಕಾಶವಾಣಿ ಉದ್ಯೋಗಿ ಪ್ರೇಮನಾಥ್ ವೆಲ್ಲಿಂಗ್ಟನ್ ಅವರ ಪತಿ. == ಕೃತಿಗಳು/ಲೇಖನಗಳು == ಜಾನಪದ ಬೋಧನೆಯನ್ನೇ ವೃತ್ತಿಯಾಗಿಸಿಕೊಂಡಿರುವ ಡಾ. ವಿಜಯಲಕ್ಷ್ಮಿ ಅವರು ಹಲವಾರು ಕೃತಿಗಳು, ಲೇಖನಗಳನ್ನು ಪ್ರಕಟಿಸಿದ್ದಾರೆ. ಜಾನಪದ ಜೀರುಂಡೆ ಭಾವ ಬಿಂದಿಗೆ (ಕವನಸಂಕಲನ) ಕನ್ನಡ ಜನಪದ ಸಾಹಿತ್ಯ: ಬಂಧ - ಸಂಬಂಧ ಚೆಂಗಾಳ್ವ ಸಿರಿ ಗೊಂಡರ ರಾಮಾಯಣ: ಪ್ರತಿಸಂಸ್ಕೃತಿಯ ನಿರ್ಮಾಣ ಕನ್ನಡ ಜನಪದ ಸಾಹಿತ್ಯದಲ್ಲಿ ಸ್ತ್ರೀಸಂವೇದನೆ ಮೈಸೂರು ಜಾನಪದ ದಸರ - ೨೦೧೭ == ಉಲ್ಲೇಖಗಳು ==